ಧೃತಿ ಉತ್ಸವ2026
Schedule
Sat, 07 Mar, 2026 at 11:30 am to Sun, 08 Mar, 2026 at 09:00 pm
UTC+05:30Location
Kittur Rani Chennamma Sports Complex Bangalore | Bangalore, KA
Advertisement
ಕರ್ನಾಟಕದ ರಾಣಿಯರನ್ನು ಧೃತಿ ಉತ್ಸವದ ವೇದಿಕೆಯಲ್ಲಿ ನೋಡಲು ನಾವೆಲ್ಲರೂ ಬಹಳ ಉತ್ಸುಕರಾಗಿದ್ದೇವೆ.ಅದಕ್ಕೆಂದೇ ಹಲವಾರು ಮಹಿಳೆಯರು ಫ್ಯಾಶನ್ ಶೋ ಮೂಲಕ ತಮ್ಮ ಇಷ್ಟದ ರಾಣಿಯರಾಗಿ ನಿಮ್ಮ ಮುಂದೆ ಬರಲಿದ್ದಾರೆ. ಆ ಎಲ್ಲಾ ಹೆಣ್ಣುಮಕ್ಕಳ ಬಗ್ಗೆ ಒಂದು ಸಣ್ಣ ವೀಡಿಯೋ ಪರಿಚಯ ಇಲ್ಲಿದೆ.
ಇವರೆಲ್ಲರೂ ತಮ್ಮ ತಮ್ಮ ಜೀವನದ ಭೂಮಿಕೆಯನ್ನು ನಿಭಾಯಿಸುತ್ತಾ ಇರುವಂತವರು. ವರ್ಷದ ಮಗುವಿನ ಆರೈಕೆಯಲ್ಲಿ ಇರುವಂತ ಕೆಲವರು, ಮಕ್ಕಳ ಶಾಲೆಗೆ ತಿಂಡಿ ಡಬ್ಬ ರೆಡಿ ಮಾಡುವ ಧಾವಂತದಲ್ಲಿ ಇರುವವರು,ತಾವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಪ್ರೆಸೆಂಟೇಷನ್ ಸಿದ್ದಪಡಿಸುತ್ತಿರುವವರು.. ಸಂಜೆಯ ತಮ್ಮ ನಾಟಕದ ತಾಲೀಮಿಗೆ ನಿಗದಿತ ಸಮಯದಲ್ಲಿ ಇರಬೇಕಾಗಿದ್ದಾಗಿಯೂ ಈ ಕಾರ್ಕ್ರಮಕ್ಕೂ ಸಮಯ ಹೊಂದಿಸಿಕೊಳ್ಳುತ್ತಿರುವವರು.. Air hostess ತರಬೇತಿ ಅಕಾಡಮಿ MD ಆಗಿದ್ದೂ ಈ ಆಸಕ್ತಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಬಂದವರು.. ಹೀಗೆ ಅವರದ್ದೇ ಆದ ಜೀವನ ಶೈಲಿಯಿಂದ ಹೊರಬಂದು ಧೃತಿ ಉತ್ಸವದಲ್ಲಿ ಅವರೂ ಭಾಗವಹಿಸಿ ಖುಶಿ ಪಡಲು ನಿಮಗೂ ಮನ ರಂಜಿಸಲು ಸಮಯ ನೀಡಿದ್ದಾರೆ. ನೀವೆಲ್ಲಾ ಬಂದು ಧೃತಿ ಉತ್ಸವದಲ್ಲಿ ಭಾಗವಹಿಸಿ. ��� ನಿಮ್ಮನ್ನು ಎದುರುಗೊಳ್ಳಲು ಧೃತಿ ಕುಟುಂಬ ಕಾದಿದೆ.
ಕಾರ್ಯಕ್ರಮ ಬರುವ ಮಾರ್ಚ್ 7 ಹಾಗೂ 8ರಂದು ಜಯನಗರದ ಕಿತ್ತೂರುರಾಣಿ ಚೆನ್ನಮ್ಮ ಮೈದಾನದಲ್ಲಿ ನೆಡೆಯಲಿದೆ.
Advertisement
Where is it happening?
Kittur Rani Chennamma Sports Complex Bangalore, Bangalore, IndiaEvent Location & Nearby Stays:
Know what’s Happening Next — before everyone else does.











